Photo Courtesy: Twitterಬೆಂಗಳೂರು: ಕನ್ನಡ ಸಿನಿ ಪ್ರೇಕ್ಷಕರಿಗೆ ಈ ದಸರಾ ನಿಜಕ್ಕೂ ಹಬ್ಬವಾಗಲಿದೆ. ಎರಡು ಬಹುನಿರೀಕ್ಷಿತ ಸಿನಿಮಾಗಳು ಇಂದು ರಿಲೀಸ್ ಆಗುತ್ತಿವೆ.ನವರಸನಾಯಕ ಜಗ್ಗೇಶ್-ವಿಜಯ್ ಪ್ರಸಾದ್ ಕಾಂಬಿನೇಷನ್ ನಲ್ಲಿ ಈಗಾಗಲೇ ನೀರ್ ದೋಸೆ ಎಂಬ ಹಿಟ್ ಚಿತ್ರಕೊಟ್ಟಿತ್ತು. ಇದೀಗ ತೋತಾಪುರಿ ಮೂಲಕ ಈ ಜೋಡಿ ಪ್ರೇಕ್ಷಕರಿಗೆ ಕಚಗುಳಿಯಿಡಲು ಬರುತ್ತಿದೆ. ಇದು ಪಕ್ಕಾ ವಿಜಯ್ ಪ್ರಸಾದ್ ಶೈಲಿಯ ಸಿನಿಮಾ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಜೊತೆಗೆ ಜಗ್ಗೇಶ್ ಕಾಮಿಡಿ, ಮ್ಯಾನರಿಸಂ, ಅದಿತಿ ಪ್ರಭುದೇವ ನಿಮಗೆ