ಬೆಂಗಳೂರು: ಇತ್ತೀಚೆಗೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಇಂದು ಸದನದಲ್ಲೂ ಗೌರವ ಸಲ್ಲಿಸಲಾಯಿತು.ಸ್ಪೀಕರ್, ಸಿಎಂ ಬೊಮ್ಮಾಯಿ, ಶಾಸಕ ಕುಮಾರ್ ಬಂಗಾರಪ್ಪ ಸೇರಿದಂತೆ ಹಲವರು ಪುನೀತ್ ಗುಣಗಾನ ಮಾಡಿದರು. ಅವರು ಮಾಡಿದ ಸಮಾಜ ಸೇವೆಗಳನ್ನು ಸದನದಲ್ಲಿ ಸ್ಮರಿಸಲಾಯಿತು.ಈ ವೇಳೆ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ‘ಅಲ್ಪ ಸಮಯದಲ್ಲಿ ಒಬ್ಬ ನಟ ಇಷ್ಟು ಸಾಧನೆ ಮಾಡುತ್ತಾನೆ ಎಂಬುದು ಪುನೀತ್ ನಿಧನದ ಬಳಿಕ ಗೊತ್ತಾಯಿತು.ಅವರು ಕೇವಲ ಚಿತ್ರರಂಗಕ್ಕೆ ಸೀಮಿತವಾದ ವ್ಯಕ್ತಿಯಾಗಿರಲಿಲ್ಲ.