ಚೆನ್ನೈ : ರೈತರಿಗೆ ಸಹಾಯ ಮಾಡಲು ಹೊರಟ ಅಣ್ಣ ಸೂರ್ಯನ ಜೊತೆ ನಟ ಕಾರ್ತಿ ಕೂಡ ಕೈಜೋಡಿಸಿದ್ದು, ಎನ್ ಜಿಓ ಮೂಲಕ ಇಬ್ಬರು ಸಹೋದರರು ರೈತರಿಗೆ ಆರ್ಥಿಕ ನೆರವು ನೀಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ರೈತರ ಅನುಕೂಲಕ್ಕಾಗಿ ಏನಾದರೂ ಮಾಡಲು ಉತ್ಸುಕರಾಗಿದ್ದ ನಟ ಸೂರ್ಯ ಹಾಗೂ ನಟ ಕಾರ್ತಿ ಅದಕ್ಕಾಗಿಯೇ ಫೌಂಡೇಶನ್ ವೊಂದನ್ನು ಸ್ಥಾಪಿಸಿದ್ದರು. ಅದರ ಮೂಲಕ ನಟ ಸೂರ್ಯ ಇತ್ತೀಚೆಗೆ ಉತ್ತಮ ರೈತರಿಗಾಗಿ ಪ್ರಶಸ್ತಿಗಳನ್ನು ನೀಡುವುದಾಗಿ ಘೋಷಿಸಿದ್ದಾರೆ.ಅದರಂತೆ ಟಿವಿ ವಾಹಿನಿಯ