ಹೈದರಾಬಾದ್ : ನಿಖಿಲ್ ಸಿದ್ಧಾರ್ಥ ಅಭಿನಯದ ಕಾರ್ತಿಕೇಯ 2 ಚಿತ್ರದ ಕೆಲವು ದೃಶ್ಯಗಳ ಚಿತ್ರೀಕರಣಗಾಗಿ ಚಿತ್ರತಂಡ ಹಿಮಾಚಲ ಪ್ರದೇಶಕ್ಕೆ ತೆರಳಿದ್ದು, ಇದೀಗ ಭಾರೀ ಹಿಮಪಾತದಿಂದ ಚಿತ್ರೀಕರಣ ಸದ್ಯಕ್ಕೆ ನಿಲ್ಲಿಸಲಾಗಿದೆ ಎನ್ನಲಾಗಿದೆ. ಹಿಮಾಚಲ ಪ್ರದೇಶದ ಸಿಸ್ಸುವಿನಲ್ಲಿ ಭಾರೀ ಹಿಮಪಾತದಲ್ಲಿ ನಿಖಿಲ್, ನಾಯಕಿ, ಇತರ ಪಾತ್ರವರ್ಗದವರು ಮತ್ತು ಸಿಬ್ಬಂದಿಗಳು ಸೇರಿದಂತೆ ಹಲವರು ಸಿಲುಕಿಕೊಂಡಿದ್ದಾರೆ. ಹೀಗಾಗಿ ಚಿತ್ರೀಕರಣ ಸ್ಥಗಿತಗೊಳಿಸಿದ್ದು, ಚಂಡಮಾರುತ ಹೋದ ಬಳಿಕ ಚಿತ್ರೀಕರಿಸುವುದಾಗಿ ಯೋಜಿಸುತ್ತಿದ್ದಾರೆ ಎನ್ನಲಾಗಿದೆ.ಅಲ್ಲಿನ ಪರಿಸ್ಥಿತಿಯನ್ನು ಚಿತ್ರತಂಡ ವಿಡಿಯೋ ಮಾಡಿ ಬಿಡುಗಡೆ