ಎಪ್ಪತ್ತರ ದಶಕದಲ್ಲಿ ತೆರೆ ಕಂಡಿದ್ದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕಥಾ ಸಂಗಮ ಕನ್ನಡ ಚಿತ್ರರಂಗದ ಹೆಮ್ಮೆಯಾಗಿ ಸದಾ ಪ್ರೇಕ್ಷಕರ ಮನಸಲ್ಲುಳಿದಿರುವ ಚಿತ್ರ. ಇದೀಗ ಅದೇ ಹೆಸರಿನಲ್ಲಿ, ಕಣಗಾಲರ ಸ್ಫೂರ್ತಿಯಿಂದಲೇ ರಿಷಬ್ ಶೆಟ್ಟಿ ಮತ್ತೊಂದು ಕಥಾ ಸಂಗಮವನ್ನು ಸಾಕಾರಗೊಳಿಸಿದ್ದಾರೆ. ಈ ಮೂಲಕ ಆಧುನಿಕ ಕನ್ನಡ ಚಿತ್ರರಂಗದಲ್ಲೊಂದು ಮೈಲಿಗಲ್ಲು ನಿರ್ಮಿಸಿ ಕನ್ನಡ ಚಿತ್ರರಂಗದ ಘನತೆ, ಗೌರವಗಳನ್ನು ಮತ್ತಷ್ಟು ಮಿರುಗಿಸುವ ಕಾರ್ಯವನ್ನೂ ಮಾಡಿ ಮುಗಿಸಿದ್ದಾರೆ. ಕಣಗಾಲರ ಸ್ಫೂರ್ತಿಯಿಂದ ರೂಪುಗೊಂಡಿರೋ ಈ ಚಿತ್ರವನ್ನು ಅವರಿಗೇ ಅರ್ಪಿಸುವ