ಸ್ಯಾಂಡಲ್ ವುಡ್ನಲ್ಲಿ ಸದ್ಯ ಹೊಸಬರ ಅಲೆ ಜೋರಾಗಿದೆ. ಹೊಸಬರ ಸಿನಿಮಾಗಳಿಗೆ ಪ್ರೇಕ್ಷಕರು ಕೂಡ ಜೈ ಅನ್ನುತ್ತಿದ್ದಾರೆ. ಹಾಗಾಗಿ ಹೊಸ ಪ್ರತಿಭೆಗಳು ಸದ್ಯ ಚಂದನವನದಲ್ಲಿ ಮಿಂಚುತ್ತಿವೆ. ಒಂದು ಸಿನಿಮಾದಲ್ಲಿ ಅಭಿನಯಿಸಿ ಗಮನ ಸೆಳೆದ್ರೆ ಅಂತಹವರಿಗೆ ಮತ್ತೆ ಮತ್ತೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಇದೀಗ ಆ ಸರದಿ ನಟಿ ಕಾವ್ಯ ಶಾ ಅವರದ್ದು. ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ ಸಿನಿಮಾದಲ್ಲಿ ಯಶ್ ಅವರೊಂದಿಗೆ ಅಭಿನಯಿಸಿದ್ದ ಕಾವ್ಯ ಶಾ ಅವರ ಅಭಿನಯವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದರು.