ಸಂಜಯ್ ದತ್ ಗೆ ಬೆಸ್ಟ್ ಬರ್ತ್ ಡೇ ಗಿಫ್ಟ್ ಕೊಟ್ಟ ಕೆಜಿಎಫ್ 2 ಚಿತ್ರತಂಡ

ಬೆಂಗಳೂರು| Krishnaveni K| Last Modified ಗುರುವಾರ, 29 ಜುಲೈ 2021 (10:22 IST)
ಬೆಂಗಳೂರು: ಬಾಲಿವುಡ್ ನಟ, ಅಧೀರ ಪಾತ್ರಧಾರಿ ಸಂಜಯ್ ದತ್ ಬರ್ತ್ ಡೇ ನಿಮಿತ್ತ ಇಂದು ಚಿತ್ರತಂಡ ಸ್ಪೆಷಲ್ ಸುದ್ದಿಕೊಡಲಿದೆ ಎಂದು ಅಭಿಮಾನಿಗಳು ಊಹಿಸಿದ್ದರು. ಅದರಂತೇ ಚಿತ್ರತಂಡ ಉಡುಗೊರೆಯೊಂದನ್ನು ಕೊಟ್ಟಿದೆ.

 
ಕೆಜಿಎಫ್ 2 ಚಿತ್ರದಲ್ಲಿ ಸಂಜಯ್ ದತ್ ಅಧೀರನಾಗಿ ಹೇಗೆ ಕಾಣಿಸಬಹುದು ಎಂಬುದನ್ನು ಚಿತ್ರತಂಡ ಈಗಾಗಲೇ ರಿವೀಲ್ ಮಾಡಿತ್ತು. ಇದೀಗ ಚಿತ್ರತಂಡ ಇಂದು ಮತ್ತೊಂದು ಲುಕ್ ಅನಾವರಣಗೊಳಿಸಿ ಸಂಜು ಬಾಬನಿಗೆ ಹುಟ್ಟುಹಬ್ಬದ ಉಡುಗೊರೆ ನೀಡಿದೆ.
 
ಆದರೆ ಇಂದು ಸಿನಿಮಾ ರಿಲೀಸ್ ಯಾವಾಗ ಎಂಬ ಸುದ್ದಿ ಬರಬಹುದು ಎಂದು ಕಾದಿದ್ದ ಪ್ರೇಕ್ಷಕರಿಗೆ ನಿರಾಸೆಯಾಗಿದೆ. ಇದಕ್ಕೆ ಸ್ವತಃ ಸಂಜಯ್ ದತ್ ಸಮಾಧಾನ ಹೇಳಿದ್ದು, ನೀವು ಇಷ್ಟು ಸುದೀರ್ಘ ಸಮಯ ಕಾದಿದ್ದರೂ ಸಾರ್ಥಕ ಎನ್ನುವಂತೆ ಕೆಜಿಎಫ್ 2 ನಿಮ್ಮ ಮುಂದೆ ಬರಲಿದೆ ಎಂದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :