ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಾಯಕರಾಗಿರುವ ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾ ಬಿಡುಗಡೆಗೆ ಮತ್ತೊಂದು ಮುಹೂರ್ತ ಫಿಕ್ಸ್ ಆಗಿದೆ. ಸಿನಿಮಾ ಬಿಡುಗಡೆ ದಿನಾಂಕ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.ಎಲ್ಲಾ ಸರಿ ಹೋಗಿದ್ದರೆ ಜುಲೈನಲ್ಲೇ ಸಿನಿಮಾ ಬಿಡುಗಡೆಯಾಗಬೇಕಿತ್ತು. ಈ ಬಗ್ಗೆ ಚಿತ್ರತಂಡವೂ ಅಧಿಕೃತ ಪ್ರಕಟಣೆ ಹೊರಹಾಕಿತ್ತು. ಆದರೆ ಲಾಕ್ ಡೌನ್ ನಿಂದಾಗಿ ಲೆಕ್ಕಾಚಾರ ತಲೆಕೆಳಗಾಯಿತು.ಮೂಲಗಳ ಪ್ರಕಾರ ಥಿಯೇಟರ್ ಶೇ.100 ರಷ್ಟು ತೆರೆಯಲು ಅವಕಾಶ ಸಿಕ್ಕರೆ ಮತ್ತು ಕೊರೋನಾ ಮೂರನೇ ಅಲೆ ಇಲ್ಲದೇ ಇದ್ದರೆ