ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾದ ಕೊನೆಯ ಭಾಗದ ಚಿತ್ರೀಕರಣ ಆಗಸ್ಟ್ 15 ರಿಂದ ಆರಂಭವಾಗಲಿದೆ ಎಂದು ಈಗಾಗಲೇ ಸುದ್ದಿ ಬಂದಿದೆ. ಆದರೆ ಕೊನೆಯ ಭಾಗದ ಚಿತ್ರೀಕರಣ ಎಲ್ಲಿ ನಡೆಯುತ್ತದೆ ಗೊತ್ತಾ? ಮೂಲಗಳ ಪ್ರಕಾರ ಮಿನರ್ವ ಮಿಲ್ಸ್ ಬಳಿ ಈಗಾಗಲೇ ಕೊನೆಯ ಹಂತದ ಚಿತ್ರೀಕರಣಕ್ಕೆ ಸೆಟ್ ನಿರ್ಮಿಸಲಾಗಿದೆ. ಇಲ್ಲಿಯೇ ಅಂತಿಮ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ.ಈಗಾಗಲೇ ಕೆಜಿಎಫ್ 2 ಶೇಕಡಾ 90 ರಷ್ಟು ಚಿತ್ರೀಕರಣ ಪೂರ್ತಿಯಾಗಿದೆ. ಇದೀಗ