ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಲ್ಲಿ ಕೆಜಿಎಫ್ 2 ಫಿವರ್ ಶುರುವಾಗಿದೆ. ಡಿಸೆಂಬರ್ 21 ಕ್ಕೆ ಫಸ್ಟ್ ಲುಕ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.ಚಿತ್ರದ ಫಸ್ಟ್ ಲುಕ್ ಬಗ್ಗೆ ಈಗಾಗಲೇ ಜನರಲ್ಲಿ ಕುತೂಹಲವಿದೆ. ಆದರೆ ಈ ಪೋಸ್ಟರ್ ಡಿಸೈನ್ ಮಾಡುವುದಕ್ಕೆ ಕೆಜಿಎಫ್ ಚಿತ್ರತಂಡ ವಿಶೇಷ ವ್ಯಕ್ತಿಯನ್ನೇ ಕರೆಸಿದೆ.ತೆಲುಗು ಮೂಲದ ದಕ್ಷಿಣ ಭಾರತ ಸಿನಿಮಾಗಳಿಗೆ ಪೋಸ್ಟರ್ ಡಿಸೈನ್ ಮಾಡುವ ಖ್ಯಾತ ವಿನ್ಯಾಸಕಾರ ಧನಿ ಅಲೈ ಕೆಜಿಎಫ್ 2 ಪೋಸ್ಟರ್ ಡಿಸೈನ್ ಮಾಡಲಿದ್ದಾರೆ