ಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾದ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ 2 ಬಾಕ್ಸ್ ಆಫೀಸ್ ನಲ್ಲಿ ಈಗಾಗಲೇ 900 ಕೋಟಿ ರೂ.ಗಳಷ್ಟು ಗಳಿಕೆ ಮಾಡಿದೆ.ಇದರೊಂದಿಗೆ ಚಿತ್ರ ಆಲ್ ಟೈಮ್ ಗಳಿಕೆ ವಿಚಾರದಲ್ಲಿ ದಾಖಲೆಯನ್ನೇ ಮಾಡಿದೆ. ಅಮೀರ್ ಖಾನ್ ಅಭಿನಯದ ಬಾಲಿವುಡ್ ಸಿನಿಮಾ ಪಿಕೆಯನ್ನೂ ಹಿಂದಿಕ್ಕಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಈಗ ಆಲ್ ಟೈಮ್ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದೆ.ಹಿಂದಿಯಲ್ಲಿ ಆರ್ ಆರ್ ಆರ್, ಸೂರ್ಯವಂಶಿ ದಾಖಲೆಯನ್ನೂ ಹಿಂದಿಕ್ಕಿರುವ ಕೆಜಿಎಫ್