ಬೆಂಗಳೂರು: ಲಾಕ್ ಡೌನ್ ನಿಂದಾಗಿ ಇಡೀ ಚಿತ್ರರಂಗದ ಕೆಲಸ ಕಾರ್ಯಗಳೇ ಸ್ಥಗಿತವಾಗಿದ್ದವು. ಹಲವು ಸಿನಿಮಾಗಳು ಇನ್ನೂ ಬಿಡುಗಡೆಗೆ ಕಾದು ನಿಂತಿವೆ. ಈ ನಡುವೆ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೂ ನಿರಾಸೆ ಕಾದಿದೆ.ಕೆಜಿಎಫ್ 2 ಸಿನಿಮಾ ಅಕ್ಟೋಬರ್ ಅಂತ್ಯದ ವೇಳೆಗೆ ಬಿಡುಗಡೆಯಾಗುತ್ತದೆ ಎಂದು ಈಗಾಗಲೇ ಚಿತ್ರತಂಡ ಘೋಷಿಸಿದೆ. ಆದರೆ ಲಾಕ್ ಡೌನ್, ಕೊರೋನಾದಿಂದಾಗಿ ಸಿನಿಮಾದ ಚಿತ್ರೀಕರಣವೇ ಪೂರ್ತಿಯಾಗಿಲ್ಲ. ಆಗಸ್ಟ್ 15 ರ ನಂತರ ಚಿತ್ರೀಕರಣ ನಡೆಯಲಿದೆಯಾದರೂ ಇದುವರೆಗೆ ಅಧಿಕೃತ ಪೋಸ್ಟರ್ ಬಿಟ್ಟರೆ