ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾ ಬಿಡುಗಡೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ.ಕೊರೋನಾ ಇಲ್ಲದೇ ಹೋಗಿದ್ದರೆ ಕೆಜಿಎಫ್ 2 ಇದೇ ತಿಂಗಳ ಅಂತ್ಯಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಲಾಕ್ ಡೌನ್ ಕಾರಣದಿಂದಾಗಿ ಚಿತ್ರೀಕರಣವೂ ಪೂರ್ತಿಯಾಗಿಲ್ಲ. ಇದೀಗ ಫೈನಲ್ ಹಂತದ ಚಿತ್ರೀಕರಣವನ್ನು ನಡೆಸಲಾಗುತ್ತಿದೆಯಷ್ಟೇ. ಹೀಗಾಗಿ ಈ ವರ್ಷ ಚಿತ್ರ ತೆರೆಗೆ ಬಾರದು. ಆದರೆ ಮುಂದಿನ ವರ್ಷ ಜನವರಿಯಲ್ಲಿ ಚಿತ್ರಬಿಡುಗಡೆಯಾಗಲಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಜನವರಿ 14