ಬೆಂಗಳೂರು: ಅಂತೂ ಇಂತೂ ಫ್ಯಾನ್ಸ್ ಬಹುದಿನಗಳಿಂದ ಕಾಯತ್ತಿದ್ದ ಗಳಿಗೆ ಬಂದೇ ಬಿಟ್ಟಿತು. ಕೆಜಿಎಫ್ 2 ಸಿನಿಮಾ ಇಂದಿನಿಂದ ವಿಶ್ವದಾದ್ಯಂತ ಬಿಡುಗಡೆಯಾಗಿದೆ.ಮಧ್ಯರಾತ್ರಿಯಿಂದಲೇ ಶೋ ಆರಂಭವಾಗಿದ್ದು, ವಿಶ್ವದಾದ್ಯಂತ 10 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಕೆಜಿಎಫ್ 2 ರಿಲೀಸ್ ಆಗುತ್ತಿದೆ. ಇದು ಸಿನಿಮಾ ರಂಗದ ಮಟ್ಟಿಗೆ ದಾಖಲೆಯೇ ಸರಿ. ಹೀಗಾಗಿ ಚಿತ್ರ ಮೊದಲ ದಿನವೇ 100 ಕೋಟಿ ಕ್ಲಬ್ ಸೇರಿದರೂ ಅಚ್ಚರಿಯಿಲ್ಲ.ಕೆಜಿಎಫ್ 2 ಸಿನಿಮಾ ಸ್ಯಾಂಡಲ್ ವುಡ್ ಪಾಲಿಗೆ ಗರಿಮೆಯಾಗಿದ್ದು, ಕನ್ನಡದ ಸ್ಟಾರ್