ಬೆಂಗಳೂರು: ಕೆಜಿಎಫ್ 2 ಸಿನಿಮಾ ಅಕ್ಟೋಬರ್ 23 ಕ್ಕೆ ರಿಲೀಸ್ ಎಂದು ಚಿತ್ರತಂಡ ಈಗಾಗಲೇ ಘೋಷಿಸಿದೆ. ಆದರೆ ಚಿತ್ರೀಕರಣ ಪೂರ್ತಿಯಾಗಿಲ್ಲ. ಲಾಕ್ ಡೌನ್ ನಿಂದಾಗಿ ಶೂಟಿಂಗ್ ಪೂರ್ತಿಗೊಳಿಸಲು ಸಾಧ್ಯವಾಗಿಲ್ಲ. ಶೇ. 20 ರಷ್ಟು ಮಾತ್ರ ಚಿತ್ರೀಕರಣ ಬಾಕಿಯಿದೆ ಎಂದು ಚಿತ್ರತಂಡ ಹೇಳುತ್ತಾ ಬಂದಿದೆ.ಚಿತ್ರತಂಡದ ಮೂಲಗಳ ಪ್ರಕಾರ ಸಂಜಯ್ ದತ್ ಒಳಗೊಂಡ ಒಂದು ಫೈಟ್ ಸೇರಿದಂತೆ ಎರಡು ಫೈಟ್ ಬಾಕಿಯಿದ್ದು, ಇದು 25 ದಿನಗಳಲ್ಲಿ ಮುಗಿಯಬಹುದು. ಇವೆಲ್ಲವನ್ನೂ ಕರ್ನಾಟಕದಲ್ಲೇ ಚಿತ್ರೀಕರಿಸಲು ಯೋಜನೆ