ಬೆಂಗಳೂರು: ಲಾಕ್ ಡೌನ್ ಬಳಿಕ ಕೆಜಿಎಫ್ 2 ಚಿತ್ರೀಕರಣ ಮರಳಿ ಆರಂಭವಾಗಿದೆ ಎಂದು ಸುದ್ದಿ ಹಬ್ಬಿತ್ತು. ನಿರ್ದೇಶಕ ಪ್ರಶಾಂತ್ ನೀಲ್ ಕೊನೆಯ ಹಂತ ಮುಗಿಸಿಬಿಡೋಣ ಎಂದು ಟ್ವೀಟ್ ಮಾಡಿದ ಬೆನ್ನಲ್ಲೇ ಕೆಲವು ಲೊಕೇಷನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದರಿಂದ ಚಿತ್ರೀಕರಣ ಶುರುವಾಗಿದೆ ಎಂದೇ ಎಲ್ಲರೂ ಅಂದುಕೊಂಡಿದ್ದರು.