ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಟೀಸರ್ ಮೊನ್ನೆ ರಾತ್ರಿ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಇದು ಸೃಷ್ಟಿಸಿದ ಹವಾ ನೋಡಿ ಪರಭಾಷಿಕರೂ ಬೆಚ್ಚಿಬಿದ್ದಿದ್ದಾರೆ.ಕೆಜಿಎಫ್ 2 ಟೀಸರ್ ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಬೇರೆ ಭಾಷೆಯ ಸ್ಟಾರ್ ಗಳನ್ನೂ ಸೆಳೆದಿದೆ. ಸ್ವತಃ ಬಾಲಿವುಡ್ ನ ಸ್ಟಾರ್ ನಟರೂ ಟೀಸರ್ ನೋಡಿ ಕೊಂಡಾಡಿದ್ದಾರೆ. ಈಗಾಗಲೇ ದಾಖಲೆಯ ವೀಕ್ಷಣೆ ಪಡೆದಿರುವ ಕೆಜಿಎಫ್ 2 ಮುಂದೆ ಬಿಡುಗಡೆಯಾದರೆ ಮತ್ತಷ್ಟು ದಾಖಲೆ ಮಾಡೋದು ಖಂಡಿತಾ