ವಿಶ್ವದಾಖಲೆ ಮಾಡಿದ ಕೆಜಿಎಫ್ 2 ಟೀಸರ್

ಬೆಂಗಳೂರು| Krishnaveni K| Last Modified ಶನಿವಾರ, 9 ಜನವರಿ 2021 (09:44 IST)
ಬೆಂಗಳೂರು: ಕನ್ನಡ ಸಿನಿಮಾವೊಂದು ಹಾಲಿವುಡ್ ಲೆವೆಲ್ ಗೆ ಸದ್ದು ಮಾಡಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟೀಸರ್ ಈಗ ಯೂ ಟ್ಯೂಬ್ ನಲ್ಲಿ ವಿಶ್ವದಾಖಲೆ ಮಾಡಿದೆ.
 

ಬಿಡುಗಡೆಯಾದ ಒಂದೇ ದಿನದಲ್ಲಿ 80 ಮಿಲಿಯನ್ ವೀಕ್ಷಣೆ ದಾಟಿದ ಟೀಸರ್ ಗೆ 4.5 ಮಿಲಿಯನ್ ಲೈಕ್ಸ್ ಬಂದಿದೆ. ಇದು ಯೂ ಟ್ಯೂಬ್ ನಲ್ಲಿ ವಿಶ್ವದಾಖಲೆ. ಟೀಸರ್ ಬಿಡುಗಡೆಯಾದ ಕ್ಷಣದಿಂದ ಈಗಿನವರೆಗೂ ಯೂ ಟ್ಯೂಬ್ ನಲ್ಲಿ ನಂ.1 ಸ್ಥಾನದಲ್ಲಿ ಟ್ರೆಂಡಿಂಗ್ ನಲ್ಲಿದೆ. ವಿಶೇಷವೆಂದರೆ ನೆರೆಯ ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶದಲ್ಲೂ ಕೆಜಿಎಫ್ 2 ಟೀಸರ್ ಟ್ರೆಂಡಿಂಗ್ ನಲ್ಲಿದೆ. ಟೀಸರ್ ಗೆ ಈ ಮಟ್ಟಿನ ಪ್ರತಿಕ್ರಿಯೆ ಸಿಕ್ಕಿರುವುದು ನೋಡಿ ಖುಷಿಯಾಗಿರುವ ನಟ ಯಶ್, ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :