Widgets Magazine

ಕೆಜಿಎಫ್ 2 ಚಿತ್ರದ ಬಗ್ಗೆ ಮುಂದಿನ ತಿಂಗಳು ಗುಡ್ ನ್ಯೂಸ್!

ಬೆಂಗಳೂರು| Krishnaveni K| Last Modified ಶನಿವಾರ, 21 ನವೆಂಬರ್ 2020 (10:04 IST)
ಬೆಂಗಳೂರು: ಬಹುನಿರೀಕ್ಷಿತ ಸಿನಿಮಾ ಟೀಸರ್ ಯಾವಾಗ, ರಿಲೀಸ್ ಡೇಟ್ ಯಾವಾಗ? ಕೆಜಿಎಫ್ ಚಿತ್ರತಂಡದ ಎಲ್ಲರಿಗೂ ಅಭಿಮಾನಿಗಳು ಈಗ ಕೇಳುತ್ತಿರುವುದು ಇದೊಂದೇ ಪ್ರಶ್ನೆ.

 
ಇದೀಗ ನಿರ್ದೇಶಕ ಪ್ರಶಾಂತ್ ನೀಲ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅಭಿಮಾನಿಗಳು ಟ್ವಿಟರ್ ನಲ್ಲಿ ಕೆಜಿಎಫ್ 2 ಬಗ್ಗೆ ಅಪ್ ಡೇಟ್ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರಶಾಂತ್ ನೀಲ್ ಮುಂದಿನ ತಿಂಗಳು ಎಂದಿದ್ದಾರೆ. ಈಗಾಗಲೇ ಜನವರಿಯಲ್ಲಿ ಕೆಜಿಎಫ್ 2 ಟೀಸರ್ ಬಿಡುಗಡೆಯಾಗಲಿದೆ ಎಂಬ ಸುದ್ದಿ ಓಡಾಡುತ್ತಿದೆ. ಹೀಗಾಗಿ ಈ ಲಾಂಚ್ ಡೇಟ್ ನ್ನು ಡಿಸೆಂಬರ್ ನಲ್ಲಿ ಪ್ರಕಟಿಸುವ ಸಾಧ‍್ಯತೆಯಿದೆ.




ಇದರಲ್ಲಿ ಇನ್ನಷ್ಟು ಓದಿ :