ಬೆಂಗಳೂರು: ಕೆಜಿಎಫ್ 1 ಸಿನಿಮಾ ಹುಟ್ಟುಹಾಕಿದ ಕ್ರೇಜ್ ಎಷ್ಟರಮಟ್ಟಿಗಿದೆ ಎಂದರೆ ಈಗ ಜನ ಕೆಜಿಎಫ್ 2 ಬಗ್ಗೆ ಕಾತುರದಿಂದ ಕಾಯುವಂತೆ ಮಾಡಿದೆ. ಆದರೆ ಲಾಕ್ ಡೌನ್ ನಿಂದಾಗಿ ನಿಗದಿತ ಸಮಯಕ್ಕೆ ಕೆಜಿಎಫ್ 2 ಸಿನಿಮಾ ಬಿಡುಗಡೆಯಾಗುವ ಲಕ್ಷಣ ತೋರುತ್ತಿಲ್ಲ. ಟೀಸರ್ ಕೂಡಾ ಬಿಡುಗಡೆಯಾಗಿಲ್ಲ. ಈ ರೀತಿ ಬೇಸರದಲ್ಲಿರುವ ಅಭಿಮಾನಿಗಳಿಗೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.ಕೆಜಿಎಫ್ 2 ಬಗ್ಗೆ ಸದ್ಯದಲ್ಲೇ ಹೊಸ ಅಪ್ ಡೇಟ್ ಕೊಡ್ತಾ ಇದ್ದೇವೆ