ಬೆಂಗಳೂರು: ಕೆಜಿಎಫ್ ಸಿನಿಮಾ ಫಿವರ್ ದಿನೇ ದಿನೇ ಹೆಚ್ಚುತ್ತಿದೆಯೇ ಹೊರತು, ಕಡಿಮೆಯಂತೂ ಆಗಿಲ್ಲ ಎನ್ನುವುದು ಇತ್ತೀಚೆಗಿನ ವರದಿಗಳಿಂದ ತಿಳಿದುಬಂದಿದೆ.ಮಾರುಕಟ್ಟೆ ತಜ್ಞ ತರುಣ್ ಆದರ್ಶ್ ವಿಶ್ಲೇಷಣೆ ಪ್ರಕಾರ ಶಾರುಖ್ ಖಾನ್ ಅಭಿನಯದ ಜೀರೋ ಚಿತ್ರದ ಗಳಿಕೆ ದಿನೇ ದಿನೇ ಕೆಳಮುಖವಾಗಿ ಸಾಗುತ್ತಿದೆ. ಆದರೆ ಕೆಜಿಎಫ್ ದಿನೇ ದಿನೇ ಗಳಿಕೆಯಲ್ಲಿ ಮೇಲ್ಮುಖವಾಗಿ ಸಾಗುತ್ತಿದೆ ಎನ್ನಲಾಗಿದೆ. ಕೆಜಿಎಫ್ ಸಿನಿಮಾ ಬಗ್ಗೆ ಈಗಾಗಲೇ ವೀಕ್ಷಿಸಿದವರು, ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದರಿಂದ ಸಿನಿಮಾ ಬಗ್ಗೆ ಕುತೂಹಲ