ಬೆಂಗಳೂರು: ಕೆಜಿಎಫ್ ಯಶಸ್ವೀ ಓಟ ಇನ್ನೂ ಮುಂದುವರಿದಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಿನಿಮಾ ಈಗಾಗಲೇ ಹಲವು ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ.ಕೆಜಿಎಫ್ ಬಿಡುಗಡೆಯಾಗಿ ಇಂದಿಗೆ ಒಂದು ವಾರ ಕಳೆದಿದೆ. ಈಗಾಗಲೇ ಹಿಂದಿಯಲ್ಲಿ ಜೀರೋ ಸಿನಿಮಾವನ್ನು ಹಿಂದಿಕ್ಕಿರುವ ಕೆಜಿಎಫ್ ಒಂದು ವಾರದಲ್ಲಿ ಬರೋಬ್ಬರಿ 21.45 ಕೋಟಿ ರೂ. ಗಳಿಕೆ ಮಾಡಿದೆ.ಅಮೆರಿಕಾದಲ್ಲಿ ಅತೀ ಹೆಚ್ಚು ಹಣ ಮಾಡಿರುವ ಸಿನಿಮಾ ಎಂಬ ದಾಖಲೆ ಬರೆದಿರುವ ಕೆಜಿಎಫ್ ಇಲ್ಲಿಯವರೆಗೆ 500 ಮಿಲಿಯನ್ ಡಾಲರ್ ಸಂಪಾದನೆ ಮಾಡಿದೆ