ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಬಿಡುಗಡೆಗೆ ಇನ್ನು ಒಂದು ವಾರ ಬಾಕಿಯಿದ್ದು, ಆಗಲೇ ಆನ್ ಲೈನ್ ಬುಕಿಂಗ್ ಶುರುವಾಗಿದೆ.ಆನ್ ಲೈನ್ ಬುಕಿಂಗ್ ಶುರುವಾದ ಕೆಲವೇ ಗಂಟೆಗಳಲ್ಲಿ ಟಿಕೆಟ್ ಗಳು ಬಿಸಿ ತುಪ್ಪ ದೋಸೆಯಂತೆ ಖಾಲಿಯಾಗುತ್ತಿವೆ. ಮೂಲಗಳ ಪ್ರಕಾರ ಡಿಸೆಂಬರ್ 21 ರಿಂದ ಸುಮಾರು ಒಂದು ವಾರದ ಕಾಲದ ಕನ್ನಡ ವರ್ಷನ್ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ. ತಮಿಳು ಭಾಷೆಯ ಸಿನಿಮಾ ಟಿಕೆಟ್ ಕೆಲವೇ ಕೆಲವು ಬಾಕಿಯಿವೆ