ಮತ್ತೆ ಬಿಡುಗಡೆಯಾಗಿದೆ ಸಂತೋಷ್ ಚಿತ್ರಮಂದಿರದಲ್ಲಿ ಕೆಜಿಎಫ್! ಹಾಗಿದ್ರೆ ಸುದೀಪ್ ಪೈಲ್ವಾನ್ ಕತೆಯೇನು?!

ಬೆಂಗಳೂರು| Krishnaveni K| Last Modified ಭಾನುವಾರ, 8 ಸೆಪ್ಟಂಬರ್ 2019 (07:17 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ದೇಶದಾದ್ಯಂತ ಸಂಚಲನ ಮೂಡಿಸಿದ ಕೆಜಿಎಫ್ ಚಾಪ್ಟರ್ 1 ಸಿನಿಮಾ ಮತ್ತೆ ಥಿಯೇಟರ್ ನಲ್ಲಿ ರಿ ರಿಲೀಸ್ ಆಗಿದೆ.
 > ಅದೂ ಸಂತೋಷ್ ಚಿತ್ರಮಂದಿರದಲ್ಲಿ ಮತ್ತೆ ಚಿತ್ರ ಬಿಡುಗಡೆಯಾಗಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ನೂರು ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕೆಜಿಎಫ್ ರಿ ರಿಲೀಸ್ ಆಗಿರುವುದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ.>   ಆದರೆ ಇದೇ ಚಿತ್ರಮಂದಿರದಲ್ಲಿ ಸೆಪ್ಟೆಂಬರ್ 12 ರಿಂದ ಪೈಲ್ವಾನ್ ಬಿಡುಗಡೆಯಾಗುತ್ತಿದೆ. ಹೀಗಾಗಿ ಕೆಜಿಎಫ್ ಇಲ್ಲಿ ಬಿಡುಗಡೆಯಾದರೆ ಪೈಲ್ವಾನ್ ಕತೆಯೇನು ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸುತ್ತಿದ್ದಾರೆ. ಆದರೆ ಕೆಜಿಎಫ್ ಕೇವಲ ಒಂದು ವಾರವಷ್ಟೇ ಚಿತ್ರಮಂದಿರದಲ್ಲಿರಲಿದೆ. ಹೀಗಾಗಿ ಪೈಲ್ವಾನ್ ಜತೆ ಕ್ಲ್ಯಾಶ್ ಆಗದು.ಇದರಲ್ಲಿ ಇನ್ನಷ್ಟು ಓದಿ :