ಬೆಂಗಳೂರು: ನಾಳೆಯಿಂದ ಬಹು ನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಕೆಜಿಎಫ್ ಚಿತ್ರ ದೇಶದಾದ್ಯಂತ ತೆರೆಗೆ ಬರಲಿದ್ದು, ಸುಮಾರು 2000 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಪ್ರದರ್ಶನವಾಗಿ ಕನ್ನಡ ಚಿತ್ರವೊಂದು ಹೊಸ ದಾಖಲೆ ಬರೆಯಲಿದೆ.ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರ ಬಿಡುಗಡೆಯಾಗುತ್ತಿರುವುದು ಕನ್ನಡ ಚಿತ್ರರಂಗದ ಪಾಲಿಗೆ ಹೆಗ್ಗಳಿಕೆಯೇ ಸರಿ. ಬೇಡಿಕೆಗೆ ಅನುಸಾರವಾಗಿ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ ಎಂದು