Widgets Magazine

ಕಿಚ್ಚ ಸುದೀಪ್ ಕೋಟಿಗೊಬ್ಬ 3 ಟೀಸರ್ ಇಂದು

ಬೆಂಗಳೂರು| Krishnaveni K| Last Modified ಶುಕ್ರವಾರ, 21 ಫೆಬ್ರವರಿ 2020 (08:51 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಸಿನಿಮಾದ ಟೀಸರ್ ಇಂದು ಲಾಂಚ್ ಆಗುತ್ತಿದೆ. ಮಹಾಶಿವರಾತ್ರಿ ದಿನ ಬಿಡುಗಡೆ ಮಾಡುವುದಾಗಿ ಈ ಮೊದಲೇ ಚಿತ್ರತಂಡ ಘೋಷಿಸಿತ್ತು.

 
ಅದರಂತೆ ಇಂದು ಮಧ್ಯಾಹ್ನ 12.01 ಕ್ಕೆ ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಕೋಟಿಗೊಬ್ಬ 3 ಟೀಸರ್ ಬಿಡುಗಡೆಯಾಗಲಿದೆ.
 
ಇದು ಕಿಚ್ಚ ಸುದೀಪ್ ಅಭಿನಯದ ಈ ವರ್ಷದ ಮೊದಲ ಸಿನಿಮಾವಾಗಲಿದೆ. ಹೀಗಾಗಿ ಅಭಿಮಾನಿಗಳು ಭರ್ಜರಿ ಓಪನಿಂಗ್ ನಿರೀಕ್ಷೆ ಮಾಡುತ್ತಿದ್ದಾರೆ. ಈಗಾಗಲೇ ಈ ಸಿನಿಮಾದಲ್ಲಿ ಕಿಚ್ಚನ ಸ್ಟೈಲಿಶ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :