Widgets Magazine

ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ ಪೈಲ್ವಾನ್! ಯಾವ ವಾಹಿನಿ ಇಲ್ಲಿ ನೋಡಿ

ಬೆಂಗಳೂರು| Krishnaveni K| Last Modified ಶುಕ್ರವಾರ, 15 ನವೆಂಬರ್ 2019 (09:38 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಹಿಟ್ ಸಿನಿಮಾ ಪೈಲ್ವಾನ್ ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಈಗ ಕಿರುತೆರೆಯಲ್ಲಿ ಈಗ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

 
ಆದರೆ ಕನ್ನಡದಲ್ಲಲ್ಲ. ಎಲ್ಲರಿಗೂ ಗೊತ್ತಿರುವಂತೆ ಪೈಲ್ವಾನ್ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಹಿಂದಿಯಲ್ಲೂ ಸದ್ದು ಮಾಡಿತ್ತು. ಇದೀಗ ಹಿಂದಿ ಕಿರುತೆರೆ ವಾಹಿನಿ ಸೋನಿ ಮ್ಯಾಕ್ಸ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದೆ.
 
ನಾಡಿದ್ದು ಭಾನುವಾರ ಅಂದರೆ ನವಂಬರ್ 17 ರಂದು ರಾತ್ರಿ 8 ಗಂಟೆಗೆ ಪೈಲ್ವಾನ್ ಹಿಂದಿ ವರ್ಷನ್ ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಕನ್ನಡದಲ್ಲಿ ಇದು ಇನ್ನೂ ಕಿರುತೆರೆಯಲ್ಲಿ ಪ್ರಸಾರವಾಗಿಲ್ಲ.
ಇದರಲ್ಲಿ ಇನ್ನಷ್ಟು ಓದಿ :