ಬೆಂಗಳೂರು: ಅನೂಪ್ ಭಂಡಾರಿ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ಸಿನಿಮಾ ಫ್ಯಾಂಟಮ್. ಈ ಸಿನಿಮಾದಲ್ಲಿ ಸುದೀಪ್ ಪಾತ್ರವೇನು? ಇದಕ್ಕೆ ಸ್ವತಃ ಕಿಚ್ಚ ಸ್ಪಷ್ಟನೆ ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಫ್ಯಾಂಟಮ್ ಲುಕ್ ಬಹಿರಂಗವಾಗಿದ್ದು ಇದನ್ನು ನೋಡಿ ಎಲ್ಲರೂ ಸುದೀಪ್ ಈ ಸಿನಿಮಾದಲ್ಲಿ ಆಕ್ಟರಾ? ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೀಗ ಸುದೀಪ್ ಸ್ಪಷ್ಟನೆ ಕೊಟ್ಟಿದ್ದಾರೆ.ಖಂಡಿತಾ ಆಕ್ಟರ್ ಅಲ್ಲ. ಆದರೆ ನಟ ಸುದೀಪ್ ಒಂದು ಪಾತ್ರ ಮಾಡುತ್ತಿದ್ದಾರೆ ಎಂದು ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದ್ದಾರೆ.