ಹೈದರಾಬಾದ್ ನಲ್ಲಿ ಶೂಟಿಂಗ್ ಆರಂಭಿಸಿದ ಕಿಚ್ಚ ಸುದೀಪ್ ರ ‘ಫ್ಯಾಂಟಮ್’

ಹೈದರಾಬಾದ್| Krishnaveni K| Last Updated: ಗುರುವಾರ, 16 ಜುಲೈ 2020 (10:21 IST)
ಹೈದರಾಬಾದ್: ಕೊರೋನಾ ನಡುವೆಯೂ ತೀವ್ರ ಕಟ್ಟೆಚ್ಚರ ವಹಿಸಿ ಕಿಚ್ಚ ಸುದೀಪ್ ನಾಯಕರಾಗಿರುವ ಅನೂಪ್ ಭಂಡಾರಿ ನಿರ್ದೇಶನದ ‘ಫ್ಯಾಂಟಮ್’ ಗೆ ಹೈದರಾಬಾದ್ ನಲ್ಲಿ ಚಾಲನೆ ನೀಡಲಾಗಿದೆ.

 
ಕೊರೋನಾ ಭೀತಿಯ ನಡುವೆ ಬಹಳ ದಿನಗಳ ನಂತರ ಕಿಚ್ಚ ಶೂಟಿಂಗ್ ಗೆ ಹಾಜರಾದ ಖುಷಿಯಲ್ಲಿದ್ದಾರೆ. ಆದರೆ ಈ ನಡುವೆ ತಮ್ಮ ತಂಡ ಮೈಮರೆತಿಲ್ಲ. ಸರ್ಕಾರ ಹೇಳಿದ ನಿಯಮಗಳನ್ನು ಪಾಲಿಸಿಕೊಂಡು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಚಿತ್ರೀಕರಣ ಆರಂಭಿಸಲಾಗಿದೆ ಎಂದು ಕಿಚ್ಚ ಹೇಳಿದ್ದಾರೆ.
 
ಹೈದರಾಬಾದ್‍ ನಲ್ಲಿ ಶೂಟಿಂಗ್ ನಡೆಯುತ್ತಿದ್ದರೂ ತಮ್ಮ ಯೂನಿಟ್ ನಲ್ಲಿ ಎಲ್ಲಾ ಕನ್ನಡ ಸಿನಿಮಾ ರಂಗದ ಕಲಾವಿದರು, ತಂತ್ರಜ್ಞರನ್ನೇ ಬಳಸಿಕೊಳ್ಳಲಾಗಿದೆ ಎಂದು ಸುದೀಪ್ ಮಾಹಿತಿ ನೀಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :