ಬೆಂಗಳೂರು: ಕಿಚ್ಚ ಸುದೀಪ್ ಇತ್ತೀಚೆಗೆ ಹಲವು ಸಮಾಜಮುಖೀ ಕೆಲಸ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ. ಇದೀಗ ಅಂತಹದ್ದೇ ಒಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ.ಚಿತ್ರದುರ್ಗದ ನಾಲ್ಕು ಸರಕಾರಿ ಶಾಲೆಗಳನ್ನು ದತ್ತು ಪಡೆಯುವ ಮೂಲಕ ಕಿಚ್ಚ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಕಿಚ್ಚ ಚ್ಯಾರಿಟೇಬಲ್ ಸೊಸೈಟಿ ಸರಕಾರಿ ಶಾಲೆಗಳ ಗುಣಮಟ್ಟ ಅಭಿವೃದ್ಧಿ ಕೆಲಸಕ್ಕೆ ಮುಂದಾಗಿದ್ದು, ಇದೀಗ ಮೊದಲನೆಯ ಪ್ರಯತ್ನವಾಗಿ ನಾಲ್ಕು ಶಾಲೆಗಳನ್ನು ದತ್ತು ಪಡೆದಿದೆ.ಈ ಶಾಲೆಗೆ ಬೇಕಾದ ಮೂಲ ಸೌಕರ್ಯಾಭಿವೃದ್ಧಿಯನ್ನು ಕಿಚ್ಚನ ಫೌಂಡೇಷನ್ ಮಾಡಲಿದೆ. ಈ