ಬೆಂಗಳೂರು: ಲಾಕ್ ಡೌನ್ ವೇಳೆ ಬಡವರಿಗೆ ನಿತ್ಯದ ಊಟಕ್ಕೆ ತೊಂದರೆಯಾಗದಿರಲಿ ಎಂದು ಕಿಚ್ಚ ಸುದೀಪ್ ಅಭಿಮಾನಿಗಳ ಬಳಗ ಆಹಾರ ಒದಗಿಸುವ ಉತ್ತಮ ಕೆಲಸ ಮಾಡುತ್ತಿದೆ. ಆದರೆ ಈ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದಕ್ಕೆ ಕಿಚ್ಚ ಕಿವಿ ಮಾತು ಹೇಳಿದ್ದಾರೆ.ಹಾಸನದಲ್ಲಿ ಬಡವರಿಗೆ ಊಟದ ವ್ಯವಸ್ಥೆ ಮಾಡಿದ್ದ ಕಿಚ್ಚನ ಅಭಿಮಾನಿಗಳ ಬಳಗ ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಪ್ರಕಟಿಸಿ ಕಿಚ್ಚನ ಗಮನ ಸೆಳೆದಿದ್ದರು. ಆದರೆ ಈ ವಿಡಿಯೋದಲ್ಲಿ ಜನರು ಗುಂಪು ಗುಂಪಾಗಿ