ಬೆಂಗಳೂರು: ಕಿಚ್ಚ ಸುದೀಪ್ ಯಾವತ್ತೂ ತಾವು ತಮ್ಮನ್ನು ಓಲೈಸುವವರ ಬಲೆಗೆ ಬೀಳುವ ವ್ಯಕ್ತಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅದಕ್ಕೆ ಕಾರಣ ಈ ಟ್ವೀಟ್. ಸುದೀಪ್ ರನ್ನು ಖುಷಿಪಡಿಸಲು ಅಭಿಮಾನಿಯೊಬ್ಬ ಟ್ವಿಟರ್ ನಲ್ಲಿ ಅವರನ್ನು ಬೇರೆ ನಟರಿಗಿಂತ ಸುದೀಪ್ ಹೇಗೆ ಭಿನ್ನ ಎಂದು ಮೆಸೇಜ್ ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್, ಇನ್ನೊಬ್ಬ ನಟನ ಜತೆಗೆ ಹೋಲಿಸಿ ನನ್ನನ್ನು ಹೊಗಳಬೇಡಿ. ನನ್ನ ಸಹ ನಟರ ಬಗ್ಗೆ ಅವಹೇಳನಕಾರಿಯಾಗಿ ಅಥವಾ ಘನತೆಗೆ ಕುತ್ತು ತರುವಂತಹ