ವಿಲನ್ ನಿರ್ಮಾಪಕ, ನಿರ್ದೇಶಕರ ವಿರುದ್ಧ ಕಿಚ್ಚ ಸುದೀಪ್ ಗರಂ ಆಗಿದ್ದೇಕೆ?

ಬೆಂಗಳೂರು, ಶನಿವಾರ, 8 ಡಿಸೆಂಬರ್ 2018 (08:56 IST)

ಬೆಂಗಳೂರು: ದಿ ವಿಲನ್ ಸಿನಿಮಾ 50 ದಿನ ಪೂರೈಸಿದೆ. ಆದರೆ ನಿರ್ಮಾಪಕರಾಗಲೀ, ನಿರ್ದೇಶಕರಾಗಲಿ ಈ ಸಿನಿಮಾ ಅರ್ಧಶತಕ ಪೂರೈಸಿದ ಸಂಭ್ರಮ ಆಚರಿಸುವ ಮೂಡ್ ನಲ್ಲಿ ಇಲ್ಲ. ಇದೀಗ ನಿರ್ಮಾಪಕ, ನಿರ್ದೇಶಕರ ಧೋರಣೆಗೆ ಕಿಚ್ಚ ಸುದೀಪ್ ಗರಂ ಆಗಿದ್ದಾರೆ.


 
ಇವರಿಗಿಂತ ಹೆಚ್ಚು ಅಭಿಮಾನಿಗಳೇ ಏನೇನೋ ಮಾಡಿಕೊಂಡು, ಆನ್ ಲೈನ್ ನಲ್ಲಿ ಚಿತ್ರಮಂದಿರಗಳ ಎದುರು ಸಂಭ್ರಮಾಚರಣೆ ಮಾಡುತ್ತಿರುವುದನ್ನು ನೋಡಿ ಕಿಚ್ಚ ಸುದೀಪ್ ಗರಂ ಆಗಿಯೇ ಟ್ವೀಟ್ ಮಾಡಿದ್ದು, ನಿರ್ಮಾಪಕರಿಗೆ ಟಾಂಗ್ ಕೊಟ್ಟಿದ್ದಾರೆ.
 
‘ನಿಜವಾಗಿ ಯಾರು ಸಂಭ್ರಮಾಚರಿಸಬೇಕಿತ್ತೋ ಅವರು ಕಾರಣವೇ ಇಲ್ಲದೆ ಸಂಭ್ರಮಾಚರಣೆಗೆ ಬೆಲೆಯೇ ಕೊಡದಿರುವಾಗ ನಿಮ್ಮಂತಹ ಅಭಿಮಾನಿಗಳು ಪೋಸ್ಟರ್ ಗಳನ್ನು ಕ್ರಿಯೇಟ್ ಮಾಡಿ ಸಂಭ್ರಮಾಚರಿಸುತ್ತಿರುವುದು ನಿಜಕ್ಕೂ ನಿಮ್ಮ ಪ್ರೀತಿ ತೋರಿಸುತ್ತದೆ. ನಾನು ಯಾವತ್ತೂ ಹೇಳುವಾಗ ಇದು ನಮಗೆ ಸಿಗುವ ಪಾಠ, ನಾವು ಅದನ್ನು ಕಲಿತು ಮುಂದೆ ನಡೆಯಬೇಕು. ದಿ ವಿಲನ್ ಸಿನಿಮಾದಲ್ಲಿ ಸಾಕಷ್ಟು ಉತ್ತಮ ಕ್ಷಣಗಳನ್ನು ನೋಡಿದ್ದೇನೆ, ಅದನ್ನು ಸ್ಮರಿಸಿಕೊಳ್ಳುತ್ತೇನೆ’ ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ. ಆ ಮೂಲಕ ಅರ್ಧಶತಕ ಪೂರೈಸಿದ ಖುಷಿಯನ್ನೇ ಮರೆತಿರುವ ನಿರ್ಮಾಪಕ, ನಿರ್ದೇಶಕರಿಗೆ ಟಾಂಗ್ ಕೊಟ್ಟಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಾದ್ ಶಹಾ ಶಾರುಖ್ ಖಾನ್, ಸೌತ್ ಸ್ಟಾರ್ ಧನುಷ್ ಗೆ ರಾಕಿ ಬಾಯ್ ಯಶ್ ಸವಾಲು

ಬೆಂಗಳೂರು: ಡಿಸೆಂಬರ್ ನಲ್ಲಿ ಈ ಬಾರಿ ಸಿನಿ ಪ್ರಿಯರಿಗೆ ಹಬ್ಬವೋ ಹಬ್ಬ. ಕನ್ನಡ, ತಮಿಳು, ಹಿಂದಿಯಲ್ಲಿ ಮೂರು ...

news

ಸೈಫ್ ಆಲಿಖಾನ್ ಪುತ್ರಿ ಸಾರಾಗೆ ಲಿಪ್ ಲಾಕ್ ಮಾಡೋದು ಅಂದ್ರೆ ತುಂಬಾ ಇಷ್ಟವಂತೆ!

ಮುಂಬೈ: ಸೈಫ್ ಆಲಿ ಖಾನ್ ಪುತ್ರಿ ಸಾರಾ ಆಲಿಖಾನ್ ಈಗಷ್ಟೇ ಸುಶಾಂತ್ ಸಿಂಗ್ ರಜಪೂತ್ ಜತೆಗೆ ಕೇದಾರ್ ನಾಥ್ ...

news

ಅನಿಲ್ ಕುಂಬ್ಳೆಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ ಸುಮಲತಾ ಅಂಬರೀಷ್

ಬೆಂಗಳೂರು: ಟೀಂ ಇಂಡಿಯಾ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆಗೆ ಸುಮಲತಾ ಅಂಬರೀಷ್ ವಿಶೇಷ ಧನ್ಯವಾದ ...

news

ಸುಳ್ಳು ಸುದ್ದಿಯನ್ನೇ ನಿಜ ಮಾಡಿದ್ರು ರಾಕಿಂಗ್ ಸ್ಟಾರ್ ಯಶ್!

ಬೆಂಗಳೂರು: ಕೆಜಿಎಫ್ ಕ್ರೇಜ್ ನಲ್ಲಿ ಮುಳುಗಿದ್ದಾಗ ರಾಕಿಂಗ್ ಸ್ಟಾರ್ ಯಶ್ ಮುಂದೆ ‘ಬಾಹುಬಲಿ’ ಖ್ಯಾತಿಯ ...