ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ವೀಕ್ಷಿಸಿದ ಕಿಚ್ಚ ಸುದೀಪ್ ಮೆಚ್ಚುಗೆಯ ಚಪ್ಪಾಳೆ ನೀಡಿದ್ದಾರೆ.ಕೆಲವು ಸಿನಿಮಾಗಳು ನಮಗೆ ಒಳ್ಳೆಯ ಭಾವನೆ, ಖುಷಿ ನೀಡುತ್ತದೆ. ಆದರೆ ಕೆಲವು ಸಿನಿಮಾ ಮಾತ್ರ ಮಾತೇ ಹೊರಡದಂತೆ ಮಾಡುತ್ತದೆ. ಅಂತಹ ಸಿನಿಮಾಗಳಲ್ಲಿ ಒಂದು ಕಾಂತಾರ. ಒಂದು ಸರಳ ಕತೆಯನ್ನು ರಿಷಬ್ ಅದ್ಭುತವಾಗಿ ಬರೆದು ತೆರೆ ಮೇಲೆ ತಂದಿದ್ದಾರೆ. ಇಂತಹದ್ದೊಂದು ಕಲ್ಪನೆ ಬರುವುದಾದರೂ ಹೇಗೆ ಎಂದು ನಿಜಕ್ಕೂ ನನಗೆ ಅಚ್ಚರಿಯಾಗುತ್ತದೆ.