Photo Courtesy: Twitterಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಕಿಚ್ಚ ಸುದೀಪ್ ಇದುವರೆಗೆ ಮಾಡಿರದ ಕೆಲಸವೊಂದನ್ನು ಮಾಡಿದ್ದಾರೆ. ಪ್ರೇಕ್ಷಕರ ಬಳಿ ಕ್ಷಮೆ ಯಾಚಿಸಿದ್ದಾರೆ.ಈ ಬಾರಿ ನಾಮಿನೇಷನ್ ನಲ್ಲಿ ಸ್ಪರ್ಧಿ ವರ್ತೂರು ಸಂತೋಷ್ ಸೇಫ್ ಆಗಿದ್ದರು. ಹಾಗಿದ್ದರೂ ಅವರು ಮನೆಯಿಂದ ಹೊರ ಹೋಗಲು ಬಯಸಿದ್ದರು. ಅವರ ಮನ ಒಲಿಸಲು ಕಿಚ್ಚ ಎಲ್ಲಾ ಪ್ರಯತ್ನ ನಡೆಸಿದರು.ಕೊನೆಗೆ ಕೇವಲ 24 ಗಂಟೆಯಲ್ಲಿ 34.5 ಲಕ್ಷ ಮತ ನಿಮಗೆ ವೀಕ್ಷಕರು ಹಾಕಿದ್ದಾರೆ ಎಂದರು.