Photo Courtesy: Twitterಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು 52 ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಅವರ ಜನ್ಮದಿನ ಪ್ರಯುಕ್ತ ಕಿಚ್ಚ46 ಟೈಟಲ್ ರಿವೀಲ್ ಆಗಿದೆ.ನಿನ್ನೆ ಮಧ್ಯರಾತ್ರಿ ಟೈಟಲ್ ಘೋಷಣೆಯಾಗಿದ್ದು, ಈ ಸಿನಿಮಾಗೆ ‘ಮ್ಯಾಕ್ಸ್’ ಎಂದು ಹೆಸರಿಡಲಾಗಿದೆ. ಈ ಬಾರಿ ಸುದೀಪ್ ಸಂಪೂರ್ಣವಾಗಿ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ.ನಿನ್ನೆ ಮಧ್ಯರಾತ್ರಿಯಿಂದಲೇ ಅಭಿಮಾನಿಗಳ ಸಂಭ್ರಮ ಶುರುವಾಗಿದೆ. ಇಂದು ಅಭಿಮಾನಿಗಳು ಕಿಚ್ಚನ ಹೆಸರಿನಲ್ಲಿ ಅನ್ನದಾನ, ರಕ್ತದಾನ ಮುಂತಾದ ಸಾಮಾಜಿಕ ಕಾರ್ಯಗಳನ್ನೂ ಹಮ್ಮಿಕೊಂಡಿದ್ದಾರೆ.