ಬೆಂಗಳೂರು: ಸ್ಯಾಂಡಲ್ ವುಡ್ ಬಾದ್ ಶಹಾ ಕಿಚ್ಚ ಸುದೀಪ್ ಇಂದು 47 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರ ಜನ್ಮದಿನವನ್ನು ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಕೊರೋನಾದಿಂದಾಗಿ ಬರ್ತ್ ಡೇ ಆಚರಿಸಿಕೊಳ್ಳಲ್ಲ ಎಂದು ಸುದೀಪ್ ಹೇಳಿದ್ದರು. ಹೀಗಾಗಿ ಅಭಿಮಾನಿಗಳು ಸಂಭ್ರಮಾಚರಣೆಯನ್ನು ಸೋಷಿಯಲ್ ಮೀಡಿಯಾಗೆ ಸೀಮಿತಗೊಳಿಸಿದ್ದಾರೆ. ಕಿಚ್ಚನಿಗಾಗಿ ಅಭಿಮಾನಿಗಳೇ ವಿಡಿಯೋ ಹಾಡೊಂದನ್ನು ನಿರ್ಮಿಸುತ್ತಿದ್ದು, ನಿರ್ದೇಶಕ ಅನೂಪ್ ಭಂಡಾರಿ ಈ ಹಾಡನ್ನು ಲಾಂಚ್ ಮಾಡಿದ್ದಾರೆ. ಇನ್ನು, ಸುದೀಪ್ ಅಭಿನಯದ