ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಸಿನಿಮಾ ಎರಡನೇ ಹಂತದ ಚಿತ್ರೀಕರಣ ಪೂರ್ತಿಗೊಳಿಸಿದ ಸುದ್ದಿಯನ್ನು ಸ್ವತಃ ಸುದೀಪ್ ನೀಡಿದ್ದರು. ಸುದೀಪ್ ರ ಈ ಟ್ವೀಟ್ ಗೆ ಅಭಿಮಾನಿಯೊಬ್ಬರು ಹೈದರಾಬಾದ್ ನಲ್ಲಿ ಶೂಟಿಂಗ್ ಮಾಡಿದ್ದೇಕೆ? ಮುಂದಿನ ಬಾರಿ ಆದಷ್ಟು ನಿಮ್ಮ ಸಿನಿಮಾಗಳನ್ನು ಕರ್ನಾಟಕದಲ್ಲೇ ಮಾಡಿ. ಇದರಿಂದ ಎಷ್ಟೋ ಕನ್ನಡಿಗ ತಂತ್ರಜ್ಞರಿಗೆ ಕೆಲಸ ಸಿಕ್ಕಂತಾಗುತ್ತದೆ ಎಂದು ಮನವಿ ಮಾಡಿದ್ದರು. ಅಭಿಮಾನಿಯ ಮನವಿಗೆ ಸ್ಪಂದಿಸಿರುವ ಕಿಚ್ಚ ‘ಈ ಸಿನಿಮಾದಲ್ಲಿ ಕೆಲಸ ಮಾಡಿದ ಬಹುತೇಕರೂ ಕನ್ನಡಿಗರೇ.