ಬೆಂಗಳೂರು: ಒಂದು ಕಾಲದ ಕುಚಿಕು ಗೆಳೆಯರಾಗಿದ್ದ ಕಿಚ್ಚ ಸುದೀಪ್ ಮತ್ತು ದರ್ಶನ್ ಈಗ ದೂರವಾಗಿ ನಾಲ್ಕು ವರ್ಷಗಳೇ ಕಳೆದಿವೆ. ಆದರೆ ಇಬ್ಬರೂ ದಿಗ್ಗಜ ನಟರು ಮತ್ತೆ ಒಂದಾಗಬೇಕೆಂದು ಬಯಸುವ ಎಷ್ಟೋ ಅಭಿಮಾನಿಗಳಿದ್ದಾರೆ.ಇಂತಹ ಅಭಿಮಾನಿಗಳು ಈಗ ಕಿಚ್ಚ-ದಚ್ಚು ಒಂದಾಗಲೆಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವೊಂದನ್ನು ಆರಂಭಿಸಿದ್ದಾರೆ. #DbossKicchaCometogether ಎಂಬ ಹ್ಯಾಶ್ ಟ್ಯಾಗ್ ಜೊತೆಗೆ ಇಬ್ಬರೂ ಹಿಂದೆ ಜೊತೆಯಾಗಿ ತೆಗೆಸಿಕೊಂಡಿದ್ದ ಫೋಟೋವನ್ನು ಟ್ಯಾಗ್ ಮಾಡಿ ಅಭಿಯಾನ ಆರಂಭಿಸಿದ್ದಾರೆ.ಇಬ್ಬರ ನಡುವಿನ ವೈಮನಸ್ಯ ಕಾರಣದಿಂದ ಇಬ್ಬರ ಅಭಿಮಾನಿಗಳೂ