ಮನೆ ಮದುವೆ ಸಂಭ್ರಮದಲ್ಲಿ ಕಿಚ್ಚ ಸುದೀಪ್

ಬೆಂಗಳೂರು| Krishnaveni K| Last Modified ಮಂಗಳವಾರ, 24 ಆಗಸ್ಟ್ 2021 (09:25 IST)
ಬೆಂಗಳೂರು: ನಟ ಕಿಚ್ಚ ಸುದೀಪ್ ಈಗ ಸಿನಿಮಾ ರಗಳೆಗಳೆಲ್ಲಾ ಬಿಟ್ಟು ಫ್ಯಾಮಿಲಿ ಜೊತೆ ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ.  
> ಸುದೀಪ್ ತಮ್ಮ ಸಂಸಾರ ಸಮೇತ ತಮ್ಮ ಮನೆ ಮದುವೆಯ ಸಂಭ್ರಮದಲ್ಲಿದ್ದಾರೆ. ಸಹೋದರ ಸಂಬಂಧಿಯ ಮದುವೆ ಕಾರ್ಯಕ್ರಮದಲ್ಲಿ ಸುದೀಪ್ ಪತ್ನಿ ಪ್ರಿಯಾ, ಸಹೋದರಿ ಸುಜಾತ ಸಂಜೀವ್, ಪುತ್ರಿ ಸಾನ್ವಿ ಸೇರಿದಂತೆ ಇಡೀ ಕುಟುಂಬ ವರ್ಗದವರೊಂದಿಗೆ ಕಾಲ ಕಳೆದಿದ್ದಾರೆ.>   ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೂ ಮೊದಲು ಸುದೀಪ್ ತಮ್ಮ ಸಹೋದರಿ ಜೊತೆ ರಾಖಿ ಹಬ್ಬ ಆಚರಿಸಿಕೊಂಡಿದ್ದರು.ಇದರಲ್ಲಿ ಇನ್ನಷ್ಟು ಓದಿ :