ಬೆಂಗಳೂರು: ಹಣಕಾಸಿನ ವಿಚಾರದಲ್ಲಿ ನಿರ್ಮಾಪಕರು ಮಾಡಿರುವ ಆರೋಪಗಳ ವಿರುದ್ಧ ಕಿಚ್ಚ ಸುದೀಪ್ ಫ್ಯಾನ್ಸ್ ಇಂದು ಫಿಲಂ ಚೇಂಬರ್ ಎದುರು ಪ್ರತಿಭಟನೆ ನಡೆಸಿದ್ದಾರೆ. ನಿರ್ಮಾಪಕ ಎಂ.ಎನ್ ಕುಮಾರ್, ಸುರೇಶ್, ರೆಹಮಾನ್ ಪತ್ರಿಕಾಗೋಷ್ಠಿಗಳಲ್ಲಿ ಕಿಚ್ಚ ಸುದೀಪ್ ರಿಂದ ತಮಗೆ ನಷ್ಟವಾಗಿದೆ, ಹಣ ಮರಳಿಸಿಕೊಡಿ ಎಂದು ಆರೋಪ ಮಾಡಿದ್ದರು. ಇದರ ಬಗ್ಗೆ ಸುದೀಪ್ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಜೊತೆಗೆ ಫಿಲಂ ಚೇಂಬರ್ ಗೆ ಬಹಿರಂಗ ಪತ್ರ ಕೂಡಾ ಬರೆದಿದ್ದರು.ಇದರ ಬೆನ್ನಲ್ಲೇ ಸುದೀಪ್ ಅಭಿಮಾನಿಗಳು