ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಮ್ಮ 19 ನೇ ಸಿನಿಮಾ ಘೋಷಣೆ ಯಾವಾಗ ಮಾಡುತ್ತಾರೆ ಎಂದು ಕಳೆದ ಒಂದು ವರ್ಷದಿಂದ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ.ಅವರಂತೇ ಕಿಚ್ಚ ಸುದೀಪ್ ಅಭಿಮಾನಿಗಳೂ ತಮ್ಮ ಮೆಚ್ಚಿನ ನಟನ ಮುಂದಿನ ಸಿನಿಮಾ ಘೋಷಣೆಗಾಗಿ ಕಾಯುತ್ತಿದ್ದಾರೆ. ಸುದೀಪ್ ತಮ್ಮ 46 ನೇ ಸಿನಿಮಾ ಯಾವುದು ಎಂದು ಇನ್ನೂ ಘೋಷಿಸಿಲ್ಲ.ವಿಕ್ರಾಂತ್ ರೋಣ ಬಳಿಕ ಸುದೀಪ್ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಕಬ್ಜ ಸಿನಿಮಾದಲ್ಲಿ ಅವರು ಅತಿಥಿ ಪಾತ್ರ ಮಾಡುತ್ತಿದ್ದಾರಷ್ಟೆ.