ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಮಹತ್ವಾಂಕಾಂಕ್ಷೆಯ ಸಿನಿಮಾ ಪೈಲ್ವಾನ್ ಶೂಟಿಂಗ್ ಮುಗಿದಿದ್ದು, ಕೊನೆಯ ಹಾಡಿನ ಚಿತ್ರೀಕರಣವೊಂದು ನಡೆಯುತ್ತಿರುವುದಾಗಿ ತಿಳಿದುಬಂದಿದೆ.ಈಗಾಗಲೇ ಪೈಲ್ವಾನ್ ಟೀಸರ್ ಭಾರೀ ಸದ್ದು ಮಾಡಿದೆ. ಸುದೀಪ್ ಪೈಲ್ವಾನ್ ನ ಅವತಾರ ನೋಡಿ ಸ್ವತಃ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದರು.ಇದೀಗ ಹಾಡಿನ ಚಿತ್ರೀಕರಣ ಮುಗಿದರೆ ಶೂಟಿಂಗ್ ಸಮಾಪ್ತಿಯಾದಂತೆ ಎಂದು ಕಿಚ್ಚ ಮಾಹಿತಿ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಪ್ರತಿಯೊಬ್ಬರೂ ತಮ್ಮ ಬೆಸ್ಟ್ ಎನ್ನುವ ಪರ್ಫಾರ್ಮೆನ್ಸ್ ಕೊಟ್ಟಿದ್ದಾರೆ.