ವಿದ್ಯಾರ್ಥಿಗಳಿಗೆ ಆನ್ ಲೈನ್ ಪಾಠ ಕೇಳಲು ಕಿಚ್ಚ ಸುದೀಪ್ ನೆರವು

ಬೆಂಗಳೂರು| Krishnaveni K| Last Modified ಸೋಮವಾರ, 16 ಆಗಸ್ಟ್ 2021 (10:30 IST)
ಬೆಂಗಳೂರು: ಕಿಚ್ಚ ಸುದೀಪ್ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಮಕ್ಕಳಿಗೆ ನೆರವಾದ ಸುದ್ದಿಗಳನ್ನು ಈ ಮೊದಲು ಓದಿರುತ್ತೀರಿ. ಈಗ ಆನ್ ಲೈನ್ ನಲ್ಲಿ ಪಾಠ ಕೇಳುವ ವಿದ್ಯಾರ್ಥಿಗಳಿಗೆ ಕಿಚ್ಚ ನೆರವಾಗಲು ಮುಂದೆ ಬಂದಿದ್ದಾರೆ.
 > ಸುದೀಪ್ ತಮ್ಮ ಕಿಚ್ಚ ಚ್ಯಾರಿಟೇಬಲ್ ಟ್ರಸ್ಟ್ ಮುಖಾಂತರ ಹೊಸ ಆಪ್ ನ್ನು ಬಿಡುಗಡೆ ಮಾಡಿದ್ದು ಇದು ಆನ್ ಲೈನ್ ಪಾಠ ಕೇಳುವ ವಿದ್ಯಾರ್ಥಿಗಳಿಗೆ ಯಾವುದೇ ಅಡೆತಡೆಯಿಲ್ಲದೇ ಪಾಠ ಕೇಳಲು ನೆರವಾಗಲಿದೆ.>   ಡಾರ್ಕ್ ಬೋರ್ಡ್ ಆನಿಮೇಷನ್ ಎಜುಕೇಷನ್ ಎಂಬ ಆಪ್ ಬಳಸಿ ಆನ್ ಲೈನ್ ಕ್ಲಾಸ್ ಮಾಡಬಹುದಾಗಿದೆ.  ಈ ಆಪ್ ಬಳಸಿ ಡಾರ್ಕ್ ಬೋರ್ಡ್ ರೂಂ  ಮಾಡಿ ಪಾಠ ಮಾಡಬಹುದು. ಅಥವಾ ಪಾಠವನ್ನು ರೆಕಾರ್ಡ್ ಮಾಡಿ ವಿದ್ಯಾರ್ಥಿಗಳಿಗೆ ಕಳುಹಿಸಬಹುದು.ಇಲ್ಲಿ ವಿದ್ಯಾರ್ಥಿಗಳು ಮೌಖಿಕ ತರಗತಿಯಲ್ಲಿ ಕೂತು ಪಾಠ ಕೇಳಿದಂತೆಯೇ ಅನುಭವ ಸಿಗುತ್ತದೆ. ಇದನ್ನು ಸರ್ಕಾರಿ, ಖಾಸಗಿ ಶಾಲೆಗಳು ಬಳಸಿಕೊಳ್ಳಬಹುದಾಗಿದೆ. ಸದ್ಯದಲ್ಲೇ ಈ ಆಪ್ ಬಗ್ಗೆ ಸರ್ಕಾರಕ್ಕೂ ಮನವರಿಕೆ ಮಾಡಿಕೊಡಲು ಕಿಚ್ಚ ಚ್ಯಾರಿಟೇಬಲ್ ಟ್ರಸ್ಟ್ ಯೋಜನೆ ಹಾಕಿಕೊಂಡಿದೆ.



ಇದರಲ್ಲಿ ಇನ್ನಷ್ಟು ಓದಿ :