Widgets Magazine

ಸಲ್ಮಾನ್ ಖಾನ್ ಫ್ಯಾಮಿಲಿ ಸದಸ್ಯನಂತಾದ ಕಿಚ್ಚ ಸುದೀಪ್

ಬೆಂಗಳೂರು| Krishnaveni K| Last Modified ಗುರುವಾರ, 26 ಡಿಸೆಂಬರ್ 2019 (08:07 IST)
ಬೆಂಗಳೂರು: ದಬಾಂಗ್ 3 ಸಿನಿಮಾ ಬಳಿಕ ಬಾಲಿವುಡ್ ತಾರೆ ಸಲ್ಮಾನ್ ಖಾನ್ ಮತ್ತು ಕಿಚ್ಚ ಸುದೀಪ್ ಎಷ್ಟು ಆತ್ಮೀಯರಾಗಿದ್ದಾರೆಂದರೆ ಪಕ್ಕಾ ಕುಟುಂಬ ಸದಸ್ಯರಂತಾಗಿದ್ದಾರೆ.

 
ಮೊನ್ನೆಯಷ್ಟೇ ಬೆಂಗಳೂರಿಗೆ ಬಂದಿದ್ದ ಸಲ್ಮಾನ್ ಸುದೀಪ್ ನನ್ನ ಸಹೋದರನಂತೆ ಎಂದಿದ್ದರು. ಅದನ್ನು ಸಲ್ಮಾನ್ ಮತ್ತೆ ಮತ್ತೆ ಪ್ರೂವ್ ಮಾಡುತ್ತಿದ್ದಾರೆ.
 
ಕ್ರಿಸ್ ಮಸ್ ಹಬ್ಬದ ಅಂಗವಾಗಿ ಸಲ್ಮಾನ್ ಸಹೋದರಿ ಅರ್ಪಿತಾ ಖಾನ್ ಆಯೋಜಿಸಿದ್ದ ಕ್ರಿಸ್ ಮಸ್ ಪಾರ್ಟಿಯಲ್ಲಿ ಕಿಚ್ಚ ಸುದೀಪ್ ಕೂಡಾ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಸಹೋದರಿ ಅರ್ಪಿತಾ, ಸಹೋದರ ಅರ್ಬಾಜ್ ಖಾನ್ ಸೇರಿದಂತೆ ಆತ್ಮೀಯರ ಬಳಗದಲ್ಲಿ ಕಿಚ್ಚ ಸುದೀಪ್ ಕೂಡಾ ಕಾಣಿಸಿಕೊಂಡಿದ್ದು, ಪಾರ್ಟಿಯಲ್ಲಿ ಮಸ್ತ್ ಮಜಾ ಮಾಡಿದ ಫೋಟೋಗಳು ವೈರಲ್ ಆಗಿವೆ.
ಇದರಲ್ಲಿ ಇನ್ನಷ್ಟು ಓದಿ :