ಬೆಂಗಳೂರು: ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಿನ್ನೆಯಷ್ಟೇ ಬರ್ತ್ ಡೇ ಆಚರಿಸಿಕೊಂಡಿದ್ದರು. ಬರ್ತ್ ಡೇ ದಿನವೇ ಅವರ ಕೋಟಿಗೊಬ್ಬ 3 ಟೀಸರ್ ಲಾಂಚ್ ಆಗಿತ್ತು. ಈ ಟೀಸರ್ ನ್ನು ದಾಖಲೆಯ ಪ್ರಮಾಣದಲ್ಲಿ ವೀಕ್ಷಿಸುವ ಮೂಲಕ ಅಭಿಮಾನಿಗಳು ತಮ್ಮ ಪ್ರೀತಿಯ ಕಿಚ್ಚನಿಗೆ ಬೆಸ್ಟ್ ಗಿಫ್ಟ್ ನೀಡಿ ಖುಷಿ ತಂದಿದ್ದಾರೆ. ಕೋಟಿಗೊಬ್ಬ 3 ಟೀಸರ್ ಬಿಡುಗಡೆಯಾದ ಒಂದೇ ಗಂಟೆಯಲ್ಲಿ 300,000 ವೀಕ್ಷಣೆ ಪಡೆದು ದಾಖಲೆ ಮಾಡಿದೆ. ಈ ಮೊದಲು ಕೋಟಿಗೊಬ್ಬ