ದುಬೈ: ಐಪಿಎಲ್ 13 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುವ ಕನ್ನಡಿಗ ಮಯಾಂಕ್ ಅಗರ್ವಾಲ್ ನಿನ್ನೆಯ ಪಂದ್ಯದಲ್ಲಿ ಆಡಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಒಂದೆಡೆ ಸತತವಾಗಿ ವಿಕೆಟ್ ಉರುಳುತ್ತಿದ್ದರೂ ಕೆಚ್ಚೆದೆಯಿಂದ ಹೋರಾಡಿದ ಅಗರ್ವಾಲ್ 89 ರನ್ ಗಳಿಸಿ ಔಟಾದರು. ಆದರೆ ಅವರ ಹೋರಾಟದ ಮನೋಭಾವವನ್ನು ಎಲ್ಲರೂ ಕೊಂಡಾಡಿದ್ದಾರೆ. ವಿಶೇಷವಾಗಿ ನಟ ಕಿಚ್ಚ ಸುದೀಪ್ ಮಯಾಂಕ್ ಆಡಿದ ಪರಿಯನ್ನು ಕೊಂಡಾಡಿದ್ದಾರೆ. ಚೆನ್ನಾಗಿ ಆಡಿದೆ ಮಯಾಂಕ್. ನಿನ್ನ ಪ್ರದರ್ಶನದ ಬಗ್ಗೆ