ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಪ್ರಕಾಶ್ ರೈ ನೀಡಿದ ಹೇಳಿಕೆ ಕೆಲವು ವರ್ಗದವರ ಟೀಕೆಗೆ ಗುರಿಯಾಗಿತ್ತು. ಈಗ ಕಿಚ್ಚ ಸುದೀಪ್ ಪ್ರಕಾಶ್ ರೈಯ ಅಂಕಣವೊಂದನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಪ್ರಕಾಶ್ ರೈ ಬಲಪಂಥೀಯರ ಬಗ್ಗೆ ಮಾತನಾಡಿದ್ದು, ಆ ವರ್ಗದವರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಾಶ್ ರೈ ನಿಮಗೆ ಇಂತಹದ್ದೊಂದು ಹೇಳಿಕೆ ನೀಡುವ ಅಗತ್ಯವೇನಿತ್ತು ಎಂದು ಅಭಿಪ್ರಾಯಗಳು ಬಂದಿದ್ದವು.ಈ ಬಗ್ಗೆ ಪ್ರಕಾಶ್ ರೈ