ಬೆಂಗಳೂರು: ಕಿಚ್ಚ ಸುದೀಪ್ ತಾವು ನಾಯಕರಾಗಿ ಅಭಿನಯಿಸುತ್ತಿರುವ ಫ್ಯಾಂಟಮ್ ಸಿನಿಮಾದ ಮತ್ತೊಂದು ಪ್ರಮುಖ ಪಾತ್ರಧಾರಿಯ ಫಸ್ಟ್ ಲುಕ್ ಲಾಂಚ್ ಮಾಡಿದ್ದಾರೆ.ನಿರ್ದೇಶಕ ಅನೂಪ್ ಸಹೋದರ ನಿರೂಪ್ ಭಂಡಾರಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂದು ಅವರ ಜನ್ಮದಿನವಾಗಿದ್ದು, ಈ ವಿಶೇಷ ದಿನಕ್ಕೆ ಫ್ಯಾಂಟಮ್ ಸಿನಿಮಾದಲ್ಲಿ ಅವರ ಲುಕ್ ಲಾಂಚ್ ಮಾಡಲಾಗಿದೆ. ನಿರೂಪ್ ಪಾತ್ರದ ಹೆಸರು ಸಂಜೀವ್ ಗಂಭೀರ ಎಂದು ತಿಳಿದುಬಂದಿದೆ.