ಹಸಿದು ಬಂದ ಯಾರನ್ನೂ ಸುಮ್ನೇ ಕಳುಹಿಸಲ್ವಂತೆ ಕಿಚ್ಚ ಸುದೀಪ್

ಬೆಂಗಳೂರು| Krishnaveni K| Last Modified ಸೋಮವಾರ, 9 ಸೆಪ್ಟಂಬರ್ 2019 (09:23 IST)
ಬೆಂಗಳೂರು: ಕಿಚ್ಚ ಸುದೀಪ್ ಸಿನಿಮಾ ರಂಗದಲ್ಲಿ ಅಭಿನಯದ ಮೂಲಕ ತಮ್ಮ ಅಭಿಮಾನಿಗಳ ಪಾಲಿಗೆ ಆರಾದ್ಯ ದೈವವಾಗಿದ್ದಾರೆ. ಆದರೆ ನಿಜ ಜೀವನದಲ್ಲೂ ಕಿಚ್ಚ ಹಲವು ಬಾರಿ ತಾವು ಹೀರೋ ಎಂದು ಸಾಬೀತು ಪಡಿಸಿದ್ದಾರೆ.

 
ಕಷ್ಟದಲ್ಲಿರುವ ಎಷ್ಟೋ ಜನರಿಗೆ ಕಿಚ್ಚ ಮಾಡುವ ಹಲವು ರೀತಿಯಲ್ಲಿ ಮಾಡುವ ಸಹಾಯಗಳು ಕೆಲವೊಮ್ಮೆ ಸುದ್ದಿಯಾಗಿದ್ದರೆ, ಇನ್ನು ಕೆಲವೊಮ್ಮೆ ನಮಗೇ ಗೊತ್ತಿಲ್ಲದೇ ಹೋಗುತ್ತದೆ. ಆದರೆ ಈ ರೀತಿ ಸಹಾಯ ಮಾಡಲು ಕಿಚ್ಚನಿಗೆ ಸಾಧ‍್ಯವಾಗುತ್ತದೆ? ಹೀಗಂತ ಟ್ವಿಟರ್ ನಲ್ಲಿ ವ್ಯಕ್ತಿಯೊಬ್ಬರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಕಿಚ್ಚ ನೀಡಿದ ಉತ್ತರ ನಿಜಕ್ಕೂ ಅಭಿಮಾನಿಗಳ ಮೆಚ್ಚುಗೆ ವ್ಯಕ್ತವಾಗಿದೆ.
 
‘ಇನ್ನೊಬ್ಬರಿಗೆ ನೀಡುವುದರಿಂದ ನಾನು ಬಡವನಾಗುವುದಿಲ್ಲ. ನನಗೆ ಊಟ ಬೇಕಾಗಿದ್ದಾಗ ನನ್ನ ತಟ್ಟೆ ಖಾಲಿಯಾಗಿತ್ತು, ಆಗಲೇ ನಾನು ಪಾಠ ಕಲಿತೆ. ಹಸಿದು ನನ್ನ ಬಳಿ ಬರುವ ಯಾರನ್ನೂ ನಾನು ನಿರಾಸೆಯಿಂದ ವಾಪಸ್ ಕಳುಹಿಸಿಲ್ಲ’ ಎಂದು ಸುದೀಪ್ ಉತ್ತರಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :